
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು 2026ರ ಡಿಸೆಂಬರ್ನಿಂದ 2027ರ ಮಾರ್ಚ್ವರೆಗಿನ 14 ಸ್ಪರ್ಧಾತ್ಮಕ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
ಜೆಇಇ–ಮೇನ್ ಮೊದಲ ಆವೃತ್ತಿಯನ್ನು 2027ರ ಜನವರಿ 22ರಿಂದ 30ರವರೆಗೆ ಪ್ರಸ್ತಾಪಿಸಿದ್ದು, ಸಿಯುಇಟಿ–ಪಿಜಿ ಪರೀಕ್ಷೆಯನ್ನು ಮಾರ್ಚ್ನಲ್ಲಿ ನಡೆಸಲು ಯೋಜಿಸಲಾಗಿದೆ.
ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಕಾರಣಗಳಿಂದ ಈ ಪ್ರಸ್ತಾವಿತ ವೇಳಾಪಟ್ಟಿಗಳು ಬದಲಾವಣೆಗೆ ಒಳಪಡಬಹುದು ಎಂದು ಎನ್ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.