
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದಲ್ಲಿ, ಫಾರ್ಮ್-6 ತಿದ್ದುಪಡಿ ಮತ್ತು ಇಸಿಐನೆಟ್ ತಂತ್ರಾಂಶದ ಬಳಕೆಯಂತಹ ಪ್ರಕ್ರಿಯೆಗಳ ಕುರಿತು ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು 10 ತಿಂಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ಎಸ್ಐಆರ್ ದಾಖಲೆಗಳೊಂದಿಗೆ ವಿವರ ಹೊಂದಿಕೆಯಾಗದ ಕಾರಣ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೇರಿದಂತೆ 33.13 ಲಕ್ಷ ಜನರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಈ ಬೆಳವಣಿಗೆಯ ಬಳಿಕ ವಿಪಕ್ಷಗಳಾದ ಶಿವಸೇನೆ (ಯುಬಿಟಿ), ಕಾಂಗ್ರೆಸ್, ಟಿಎಂಸಿ ಹಾಗೂ ಎಸ್ಪಿ ನಾಯಕರು ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ದೋಷಾರೋಪಣೆ ನಿರ್ಣಯ ಮಂಡಿಸುವಂತೆ ಆಗ್ರಹಿಸಿದ್ದಾರೆ.