
ಟರ್ಕಿಯಲ್ಲಿ ನಡೆದ ನಾಟೋ ಶೃಂಗಸಭೆಯ ನಂತರ, ಇರಾನ್ನಿಂದ ಎದುರಾಗಿದ್ದ ಸಂಭಾವ್ಯ ಹತ್ಯೆ ಯತ್ನದ ಬೆದರಿಕೆಯ ಹಿನ್ನೆಲೆಯಲ್ಲಿ ತಾವು ರಹಸ್ಯವಾಗಿ ವಿಮಾನ ಬದಲಾಯಿಸಿದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ.
ಭದ್ರತಾ ಸಂಸ್ಥೆಗಳ ಸೂಚನೆಯಂತೆ, ಟ್ರಂಪ್ ಅವರು ಏರ್ ಫೋರ್ಸ್ ಒನ್ ವಿಮಾನದಿಂದ ಕ್ಯಾಟರಿಂಗ್ ಟ್ರಕ್ ಮೂಲಕ ರಹಸ್ಯವಾಗಿ ಮತ್ತೊಂದು ಸಣ್ಣ 'C-32A' ಸೇನಾ ವಿಮಾನಕ್ಕೆ ಸ್ಥಳಾಂತರಗೊಂಡಿದ್ದರು.
ಇಸ್ರೇಲಿ ಗೂಢಚಾರಿ ಸಂಸ್ಥೆಗಳು ನೀಡಿದ ಮುನ್ಸೂಚನೆಯ ಪ್ರಕಾರ, ಟ್ರಂಪ್ ಪ್ರಯಾಣಿಸುತ್ತಿದ್ದ ವಿಮಾನದ ಮೇಲೆ ಕ್ಷಿಪಣಿ ದಾಳಿ ನಡೆಸಲು ಇರಾನ್ ಬೆಂಬಲಿತ ಪಡೆಗಳು ಸಂಚು ರೂಪಿಸಿದ್ದವು ಎಂದು ವರದಿಯಾಗಿದೆ.