
15 ವರ್ಷದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್ ಆಡಲು ಸಮರ್ಥರಾಗಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಂಬಾಬ್ವೆ ವಿರುದ್ಧದ ಟಿ-20 ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ವೈಭವ್, ಪ್ರಸ್ತುತ ದುಲೀಪ್ ಟ್ರೋಫಿಯಲ್ಲಿ ಈಸ್ಟ್ ಝೋನ್ ಪರ ಆಡಿ ಕೇವಲ 8 ರನ್ ಗಳಿಸಿದ್ದಾರೆ.
ವೈಭವ್‌ಗೆ ಟೆಸ್ಟ್ ತಂಡದಲ್ಲಿ ಅವಕಾಶ ನೀಡುವ ಮುನ್ನ ಸಾಕಷ್ಟು ಪ್ರಥಮ ದರ್ಜೆ ಪಂದ್ಯಗಳ ಅನುಭವ ಅಗತ್ಯವಿದೆ ಎಂದು ಸ್ಟೀವ್ ವಾ ಸಲಹೆ ನೀಡಿದ್ದಾರೆ.