
ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಕಳೆದುಹೋದ ತನ್ನ ಚಪ್ಪಲಿಯನ್ನು ಹುಡುಕಲು ಗೋವಾ ಮೂಲದ ಶುಭಾಂಗ್ ಬೋರ್ಕರ್ ಚಾಟ್‌ಜಿಪಿಟಿಯ ದೃಶ್ಯ ವಿಶ್ಲೇಷಣಾ ಸಾಮರ್ಥ್ಯವನ್ನು ಬಳಸಿದ್ದಾರೆ.
ಶುಭಾಂಗ್ ಚಪ್ಪಲಿಗಳ ರಾಶಿಯ ವಿಡಿಯೋ ಮತ್ತು ಫೋಟೋಗಳನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ ಕಮಾಂಡ್ ನೀಡಿದಾಗ, ಅದು ಚಪ್ಪಲಿ ಇರುವ ನಿಖರವಾದ ಜಾಗವನ್ನು ಸೂಚಿಸಿದೆ.
ಎಐ ನೀಡಿದ ಸೂಚನೆಯಂತೆ ಹುಡುಕಿದಾಗ ಚಪ್ಪಲಿ ಸಿಕ್ಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಎಐನ ದೈನಂದಿನ ಬಳಕೆಯ ಬಗ್ಗೆ ಅಚ್ಚರಿ ಮೂಡಿಸಿದೆ.