
ಬಿಡುಗಡೆಗೆ ಸಜ್ಜಾಗಿರುವ ‘ಟಾಕ್ಸಿಕ್’ ಸಿನಿಮಾದ ದೃಶ್ಯಗಳನ್ನು ಚಿತ್ರಮಂದಿರಗಳಲ್ಲಿ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದಂತೆ ನಟ ಯಶ್ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.
ವರ್ಷಗಳ ಕಾಲ ಶ್ರಮವಹಿಸಿ ನಿರ್ಮಿಸಿರುವ ಈ ಸಿನಿಮಾದ ಕಥಾಹಂದರ ಮತ್ತು ಟ್ವಿಸ್ಟ್ಗಳನ್ನು ಬಹಿರಂಗಪಡಿಸದೆ, ಪ್ರೇಕ್ಷಕರು ದೊಡ್ಡ ಪರದೆಯ ಮೇಲೆ ಹೊಸ ಅನುಭವ ಪಡೆಯಲು ಅವಕಾಶ ನೀಡುವಂತೆ ಕೋರಿದ್ದಾರೆ.
ಈ ಚಿತ್ರದ ಹಿಂದಿ ಆವೃತ್ತಿಗೆ ಸಿಬಿಎಫ್ಸಿ ಕೆಲವು ಸಂಭಾಷಣೆ ಮತ್ತು ಡ್ರಗ್ಸ್ ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಕತ್ತರಿ ಹಾಕಿದ್ದು, ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ.