
ಪ್ರಸ್ತುತ ಮಡಗಾಂವ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಂಗಳೂರಿನ ಯಶವಂತಪುರವರೆಗೆ ವಿಸ್ತರಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.
ಈ ನವೀಕೃತ ರೈಲು ಯಶವಂತಪುರದಿಂದ ಹೊರಟು ಹಾಸನ, ಮಂಗಳೂರು ಜಂಕ್ಷನ್ ಮತ್ತು ಉಡುಪಿ ಮಾರ್ಗವಾಗಿ ಗೋವಾದ ಮಡಗಾಂವ್ ತಲುಪಲಿದೆ.
ಈ ರೈಲು ಸಂಚಾರದಿಂದ ಕರಾವಳಿ ಕರ್ನಾಟಕ, ಮಲೆನಾಡು ಹಾಗೂ ಗೋವಾ ನಡುವಿನ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಅನುಕೂಲವಾಗಲಿದೆ.