
ನೈಜೀರಿಯಾದ ಲಾಗೋಸ್ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಕಾಮನ್ವೆಲ್ತ್ ಫೆನ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಕ್ರೀಡಾಪಟುಗಳು ಮಂಗಳವಾರ ಮೂರು ಚಿನ್ನ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ವಿ.ಪಿ.ಕನಕಲಕ್ಷ್ಮಿ ಫಾಯಿಲ್ ವಿಭಾಗದಲ್ಲಿ, ಕರಣ್ ಸಿಂಗ್ ಸೇಬರ್ ವಿಭಾಗದಲ್ಲಿ ಮತ್ತು ರಾಜೇಂದ್ರನ್ ಶಾಂತಿಮೋಳ್ ಶೆರ್ಜಿನ್ ಈಪೀ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೂರು ದಿನಗಳ ಅಂತ್ಯಕ್ಕೆ ಭಾರತವು ಒಟ್ಟು 29 ಪದಕಗಳನ್ನು (8 ಚಿನ್ನ, 7 ಬೆಳ್ಳಿ ಮತ್ತು 14 ಕಂಚು) ಬಾಚಿಕೊಂಡಿದ್ದು, ಬುಧವಾರ ಚಾಂಪಿಯನ್ಷಿಪ್ ಮುಕ್ತಾಯಗೊಳ್ಳಲಿದೆ.