Sports
ಕಾಮನ್‌ವೆಲ್ತ್‌ ಯುವ ಫೆನ್ಸಿಂಗ್‌: ಭಾರತಕ್ಕೆ ಮೂರು ಸ್ವರ್ಣ ಪದಕ

ಕಾಮನ್‌ವೆಲ್ತ್‌ ಯುವ ಫೆನ್ಸಿಂಗ್‌: ಭಾರತಕ್ಕೆ ಮೂರು ಸ್ವರ್ಣ ಪದಕ

prajavani2h
THE BRIEF
1

ನೈಜೀರಿಯಾದ ಲಾಗೋಸ್‌ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಕಾಮನ್‌ವೆಲ್ತ್‌ ಫೆನ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಕ್ರೀಡಾಪಟುಗಳು ಮಂಗಳವಾರ ಮೂರು ಚಿನ್ನ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಿದ್ದಾರೆ.

2

ವಿ.ಪಿ.ಕನಕಲಕ್ಷ್ಮಿ ಫಾಯಿಲ್ ವಿಭಾಗದಲ್ಲಿ, ಕರಣ್ ಸಿಂಗ್ ಸೇಬರ್ ವಿಭಾಗದಲ್ಲಿ ಮತ್ತು ರಾಜೇಂದ್ರನ್ ಶಾಂತಿಮೋಳ್ ಶೆರ್ಜಿನ್ ಈಪೀ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

3

ಮೂರು ದಿನಗಳ ಅಂತ್ಯಕ್ಕೆ ಭಾರತವು ಒಟ್ಟು 29 ಪದಕಗಳನ್ನು (8 ಚಿನ್ನ, 7 ಬೆಳ್ಳಿ ಮತ್ತು 14 ಕಂಚು) ಬಾಚಿಕೊಂಡಿದ್ದು, ಬುಧವಾರ ಚಾಂಪಿಯನ್‌ಷಿಪ್‌ ಮುಕ್ತಾಯಗೊಳ್ಳಲಿದೆ.