
ದೆಹಲಿ-ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ನವೆಂಬರ್ 1ರಿಂದ ಬಿಎಸ್-6 ಮಾನದಂಡ ಪೂರೈಸದ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ದೆಹಲಿ-ಜೈಪುರ ಹೆದ್ದಾರಿಯ ಸರಹೌಲ್ ಬಾರ್ಡರ್ ಸೇರಿದಂತೆ ಪ್ರಮುಖ ಐದು ಗಡಿಗಳಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
ಬಿಎಸ್-6 ಅಲ್ಲದ ವಾಹನಗಳು ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಇಲ್ಲದ ವಾಹನಗಳ ಪ್ರವೇಶವನ್ನು 2027ರ ಜನವರಿ 31ರವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.