
ಸಾಯಿ ಶ್ರೀನಿಧಿ ನಿರ್ದೇಶನದಲ್ಲಿ ಮೂಡಿಬಂದಿರುವ, ಮಲೆನಾಡಿನ ಹಿನ್ನೆಲೆಯುಳ್ಳ ಫೀಲ್‌ಗುಡ್ ಫ್ಯಾಮಿಲಿ ರೋಮ್ಯಾಂಟಿಕ್ ಕಾಮಿಡಿ ಕಥಾಹಂದರವಿರುವ ‘ಮಿಸ್‌ಮ್ಯಾಚ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
‘ಬಿ.ಟಿ.ಎಸ್’ ಖ್ಯಾತಿಯ ಕೌಶಿಕ್ ಗೌಡ ಹಾಗೂ ‘ಕಂಬ್ಳಿಹುಳ’ ಖ್ಯಾತಿಯ ಅಶ್ವಿತಾ ಹೆಗ್ಡೆ ಈ ಚಿತ್ರದಲ್ಲಿ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದು, ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.
ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ತೇಜಸ್ ವೆಂಕಟೇಶ್ ಅವರು ‘ತೇಜಸ್ ಪಬ್ಲಿಕೇಶನ್’ ಮತ್ತು ‘ಸಟಾಯರ್’ ಸಂಸ್ಥೆಯ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.