
ನಟ ಯಶ್ ಅವರ ಸಿನಿಮಾ ಜರ್ನಿ ಜಾಗತಿಕ ಮಟ್ಟಕ್ಕೆ ತಲುಪಿರುವುದನ್ನು ನಟ ಕೃಷ್ಣ ಅಜಯ್ ರಾವ್ ಶ್ಲಾಘಿಸಿದ್ದು, ಮುಂಬರುವ 'ಟಾಕ್ಸಿಕ್' ಚಿತ್ರದ ಮೇಲೆ ತಮಗೆ ಹೆಚ್ಚಿನ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಯಶ್ ಅವರು ರಾಜ್ಯ ಮತ್ತು ದೇಶವನ್ನು ಗೆದ್ದಿದ್ದು, ಈಗ ವಿಶ್ವದ ಕಡೆಗೆ ಹೊರಟಿದ್ದಾರೆ ಎಂದು ಅಜಯ್ ರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಶ್ ಅವರ ವಿಷನ್ ಮತ್ತು ಸಿನಿಮಾ ಆಯ್ಕೆಗಳ ಬಗ್ಗೆ ಗೌರವ ವ್ಯಕ್ತಪಡಿಸಿದ ಅಜಯ್ ರಾವ್, ಅವರು ವಿಶ್ವ ಮಟ್ಟದಲ್ಲೂ ಯಶಸ್ವಿಯಾಗುತ್ತಾರೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ.