Economy
ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹ ₹65.96 ಲಕ್ಷ ಕೋಟಿಗೆ ಏರಿಕೆ

ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹ ₹65.96 ಲಕ್ಷ ಕೋಟಿಗೆ ಏರಿಕೆ

prajavani1h
THE BRIEF
1

ಜುಲೈ 31ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಸಂಗ್ರಹವು ₹1 ಲಕ್ಷ ಕೋಟಿ ಏರಿಕೆಯಾಗಿ ಒಟ್ಟು ₹65.96 ಲಕ್ಷ ಕೋಟಿಗೆ ತಲುಪಿದೆ ಎಂದು ಆರ್‌ಬಿಐ ತಿಳಿಸಿದೆ.

2

ಚಿನ್ನದ ಮೀಸಲು ಸಂಗ್ರಹವು ₹16,042 ಕೋಟಿ ಹೆಚ್ಚಳದೊಂದಿಗೆ ₹9.97 ಲಕ್ಷ ಕೋಟಿಗೆ ತಲುಪಿದ್ದು, ವಿದೇಶಿ ಕರೆನ್ಸಿಗಳ ಮೌಲ್ಯ ₹53.76 ಲಕ್ಷ ಕೋಟಿಯಾಗಿದೆ.

3

ದೇಶದ ಸ್ಪೆಷಲ್ ಡ್ರಾಯಿಂಗ್ ರೈಟ್ಸ್‌ (ಎಸ್‌ಡಿಆರ್) ₹1.77 ಲಕ್ಷ ಕೋಟಿ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ ಭಾರತದ ಪಾಲು ₹45,491 ಕೋಟಿಯಷ್ಟಿದೆ.