
ಫ್ರಾನ್ಸ್ನ ಪ್ಯಾರಿಸ್ನಲ್ಲಿ ನಿರ್ಮಾಣವಾಗಿರುವ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವು ಸೆಪ್ಟೆಂಬರ್ 2 ರಂದು ಲೋಕಾರ್ಪಣೆಗೊಳ್ಳಲಿದೆ.
ಉದ್ಘಾಟನೆಯ ಅಂಗವಾಗಿ ಸೆಪ್ಟೆಂಬರ್ 2 ರಿಂದ 14 ರವರೆಗೆ 13 ದಿನಗಳ ಕಾಲ 'ಪ್ಯಾರಿಸ್ ಮಂದಿರ ಮಹೋತ್ಸವ' ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ದೇವಾಲಯವು ಭಾರತೀಯ ಶಿಲ್ಪಕಲೆ ಮತ್ತು ಫ್ರೆಂಚ್ ತಾಂತ್ರಿಕತೆಯ ಸಂಗಮವಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.