
ಫುಕೆಟ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು 300 ಅಡಿ ಕೆಳಗೆ ಕುಸಿದ ಘಟನೆಗೆ ಟ್ರಿಪಲ್ ಹೈಡ್ರಾಲಿಕ್ ವೈಫಲ್ಯ ಮತ್ತು ತಾಂತ್ರಿಕ ದೋಷಗಳೇ ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ.
ಘಟನೆಯಲ್ಲಿ 17 ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಯಗೊಂಡಿದ್ದು, ಪೈಲಟ್ ಮದ್ಯಪಾನ ಮಾಡಿರಲಿಲ್ಲ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದೆ.
ವಿಮಾನ ಅಪಘಾತ ತನಿಖಾ ಸಂಸ್ಥೆ ಮತ್ತು ಡಿಜಿಸಿಎ ಈ ಘಟನೆಯನ್ನು ಗಂಭೀರವೆಂದು ಪರಿಗಣಿಸಿದ್ದು, ಏರ್ಬಸ್ ಕಂಪನಿಯ ನೆರವಿನೊಂದಿಗೆ ತನಿಖೆ ಮುಂದುವರಿಸಿದ್ದಾರೆ.