
ಭಾಲ್ಕಿ ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಕಾಡು ಹಂದಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತ ಚನ್ನಬಸಪ್ಪ ಶಿವಲಿಂಗಪ್ಪ ಭೂರೆ (70) ಮೃತಪಟ್ಟಿದ್ದಾರೆ.
ಗುರುವಾರ ಹೊಲಕ್ಕೆ ಹೋಗುತ್ತಿದ್ದಾಗ ನಡೆದ ಈ ದಾಳಿಯಲ್ಲಿ ರೈತ ಮಹಿಳೆ ಸಂಪತಾ ಸುಭಾಷ ಹೇಡೆ ಕೂಡ ಗಾಯಗೊಂಡಿದ್ದಾರೆ.
ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚನ್ನಬಸಪ್ಪ ಅವರು ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದು, ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.