
ಬೆಂಗಳೂರಿನಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಮತ್ತು ಆಟೋಗಳಲ್ಲಿ ಆ್ಯಪ್ನಲ್ಲಿ ತೋರಿಸುವ ನೋಂದಣಿ ಸಂಖ್ಯೆ ಮತ್ತು ಚಾಲಕನ ವಿವರಗಳು ವಾಹನಕ್ಕೆ ಹೊಂದಾಣಿಕೆಯಾಗದಿದ್ದರೆ ಪ್ರಯಾಣಿಕರು ವಾಹನ ಹತ್ತಬಾರದೆಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಓಲಾ, ಉಬರ್, ರ್ಯಾಪಿಡೋ ಮತ್ತು ನಮ್ಮ ಯಾತ್ರೆಯಂತಹ ಆ್ಯಪ್ಗಳಲ್ಲಿ ಇಂತಹ ವ್ಯತ್ಯಾಸಗಳ ಬಗ್ಗೆ ದೂರುಗಳು ಹೆಚ್ಚಾಗಿದ್ದು, ಇಂತಹ ವಾಹನಗಳನ್ನು ತಿರಸ್ಕರಿಸಿ 112 ತುರ್ತು ಸಹಾಯವಾಣಿಗೆ ಕರೆ ಮಾಡಲು ತಿಳಿಸಲಾಗಿದೆ.
ನಿಯಮ ಉಲ್ಲಂಘಿಸುವ ಚಾಲಕರು ಮತ್ತು ಆ್ಯಪ್ ಆಧಾರಿತ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.