
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಚಿನ್ನದ ಅಂಬಾರಿ ಹೊರುವ ಆನೆಯಾಗಿ ಧನಂಜಯ ಆನೆ ಬಹುತೇಕ ಅಂತಿಮಗೊಂಡಿದೆ.
ಅಭಿಮನ್ಯು ಆನೆ ನಿವೃತ್ತಿಯ ಹಿನ್ನೆಲೆಯಲ್ಲಿ 750 ಕೆಜಿ ತೂಕದ ಅಂಬಾರಿ ಹೊರಲು ಅರಣ್ಯ ಇಲಾಖೆಯ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
ಮಹೇಂದ್ರ, ಪ್ರಶಾಂತ ಮತ್ತು ಏಕಲವ್ಯ ರೇಸ್ನಲ್ಲಿದ್ದರೂ ತಾಲೀಮು ಹಾಗೂ ಪರಿಶೀಲನೆಯಲ್ಲಿ ಧನಂಜಯ ಮುನ್ನಡೆ ಸಾಧಿಸಿದೆ.