Sports
ರಣಜಿ ಟ್ರೋಫಿ: ಒಂದೇ ತಂಡದ ಇಬ್ಬರು ಬ್ಯಾಟರ್‌ಗಳು 194 ರನ್‌ಗಳಿಗೆ ಔಟ್

ರಣಜಿ ಟ್ರೋಫಿ: ಒಂದೇ ತಂಡದ ಇಬ್ಬರು ಬ್ಯಾಟರ್‌ಗಳು 194 ರನ್‌ಗಳಿಗೆ ಔಟ್

tv9kannada1h
THE BRIEF
1

ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ಮತ್ತು ರೈಲ್ವೇಸ್ ತಂಡಗಳ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ರಾಜಸ್ಥಾನದ ಇಬ್ಬರು ಬ್ಯಾಟರ್‌ಗಳು ದ್ವಿಶತಕದ ಅಂಚಿನಲ್ಲಿ ಎಡವಿದ್ದಾರೆ.

2

ಆರಂಭಿಕ ಬ್ಯಾಟರ್ ಸಚಿನ್ ಯಾದವ್ 358 ಎಸೆತಗಳಲ್ಲಿ 22 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 194 ರನ್ ಗಳಿಸಿ ಸ್ಟಂಪ್ ಔಟಾದರು.

3

ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರಣ್ ಲಂಬಾ 284 ಎಸೆತಗಳಲ್ಲಿ 19 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 194 ರನ್‌ ಗಳಿಸಿ ಕ್ಯಾಚ್ ನೀಡಿ ಔಟಾದರು.