
ಕರ್ನಾಟಕದಲ್ಲಿ ಮಳೆಯ ಅಬ್ಬರ ತಗ್ಗಿದ್ದು, ನವೆಂಬರ್ 8ರಿಂದ 13ರವರೆಗೆ ರಾಜ್ಯಾದ್ಯಂತ ಬಿಸಿಲು ಮತ್ತು ಮೋಡ ಕವಿದ ವಾತಾವರಣದ ಮಿಶ್ರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಪೂರ್ವ ತೆಲಂಗಾಣ ಹಾಗೂ ಕರಾವಳಿ ಆಂಧ್ರಪ್ರದೇಶದ ಮೇಲಿದ್ದ ವಾಯುಭಾರ ಕುಸಿತವು ದುರ್ಬಲಗೊಂಡಿರುವುದರಿಂದ ಉತ್ತರ ಒಳನಾಡಿನಲ್ಲಿ ಸಂಪೂರ್ಣ ಒಣ ಹವಾಮಾನ ಮುಂದುವರಿಯಲಿದೆ.