
ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 48 ಕೆಜಿ ಜೂಡೋ ವಿಭಾಗದ ಫೈನಲ್‌ನಲ್ಲಿ ಕೆನಡಾದ ಹೈಡಿ ಕ್ವಾಚ್ ಅವರನ್ನು ಸೋಲಿಸಿ ಭಾರತದ ಅಸ್ಮಿತಾ ಡೇ ಚಿನ್ನದ ಪದಕ ಗೆದ್ದಿದ್ದಾರೆ.
ಕಾಮನ್‌ವೆಲ್ತ್ ಇತಿಹಾಸದಲ್ಲಿ ಜೂಡೋದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನದ ಪದಕ ಇದಾಗಿದ್ದು, 23 ವರ್ಷದ ಅಸ್ಮಿತಾ ತ್ರಿಪುರಾದ ಸಣ್ಣ ಹಳ್ಳಿಯಿಂದ ಬಂದವರಾಗಿದ್ದಾರೆ.
ಕಳೆದ ಡಿಸೆಂಬರ್ 15ರಂದು ತಂದೆಯನ್ನು ಕಳೆದುಕೊಂಡಿದ್ದ ಅಸ್ಮಿತಾ, ಅವರ ಪ್ರೋತ್ಸಾಹ ಮತ್ತು ಭೋಪಾಲ್‌ನಲ್ಲಿ ಪಡೆದ ತರಬೇತಿಯೇ ಈ ಐತಿಹಾಸಿಕ ಗೆಲುವಿಗೆ ಕಾರಣವೆಂದು ಭಾವುಕರಾಗಿ ಸ್ಮರಿಸಿದ್ದಾರೆ.