
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ರಭಸದ ನೀರಿನಲ್ಲಿ ಕೊಚ್ಚಿಕೊಂಡು ಬರುತ್ತಿದ್ದ ಎಲ್‌ಪಿಜಿ ಸಿಲಿಂಡರ್‌ಗಳನ್ನು ಯುವಕರು ಜೀವದ ಹಂಗು ತೊರೆದು ದಡಕ್ಕೆ ತರುತ್ತಿರುವ ವಿಡಿಯೋ ವೈರಲ್ ಆಗಿದೆ.
ಆಗಸ್ಟ್ 27 ರಂದು ವರದಿಯಾದ ಈ ಘಟನೆಯಲ್ಲಿ, ಮಣ್ಣು ಮತ್ತು ಕೆಸರು ಮಿಶ್ರಿತ ನೀರಿನಲ್ಲಿ ಯುವಕರು ಈಜಿ ಹೋಗಿ ವಸ್ತುಗಳನ್ನು ರಕ್ಷಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪ್ರವಾಹದ ತೀವ್ರತೆಗೆ ಮನೆಗಳು ಮತ್ತು ವಸ್ತುಗಳು ಕೊಚ್ಚಿಹೋಗುತ್ತಿದ್ದು, ನೇಪಾಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.