
ಕರ್ನಾಟಕದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಗಂಭೀರವಾಗಿ ಎಚ್ಚರಿಸಿರುವ ಆರ್ಥಿಕ ಇಲಾಖೆಯು, ಸರ್ಕಾರದ ಹೊಸ ಬೃಹತ್ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಅಧಿಕೃತ ಟಿಪ್ಪಣಿ ರವಾನಿಸಿದೆ.
ಸರ್ಕಾರವು ಈಗಾಗಲೇ ಸಾಲ ಪಡೆಯುವ ಗರಿಷ್ಠ ಮಿತಿಯನ್ನು ಮುಟ್ಟಿದ್ದು, 2026-27ನೇ ಸಾಲಿನಲ್ಲಿ ಹೊಸ ಯೋಜನೆಗಳಿಗೆ ಸಾಲ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಗುತ್ತಿಗೆದಾರರ ರೂ. 36,136 ಕೋಟಿ ಬಾಕಿ ಬಿಲ್ ಉಳಿದಿದ್ದು, ಕೃಷಿ ಪಂಪ್ಸೆಟ್ಗಳ ಸಹಾಯಧನವೂ ಬಾಕಿ ಇದೆ.