
ಆರ್ಥಿಕ ಅಸ್ಥಿರತೆ ಎದುರಾದಾಗ ಉದ್ಯೋಗಿಗಳನ್ನು ವಜಾಗೊಳಿಸುವುದು ಕಂಪನಿಗಳ ಅನಿವಾರ್ಯವಲ್ಲ, ಕೇವಲ ಆಡಳಿತ ಮಂಡಳಿಯ ಆಯ್ಕೆಯಾಗಿದೆ ಎಂದು ಟೊರಾನಿ ಸಿಇಒ ಮೆಲಾನಿ ಡಲ್ಬೆಕ್ಕೊ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಮೂಲದ ಫ್ಲೇವರ್ಡ್ ಸಿರಪ್ ತಯಾರಿಕಾ ಕಂಪನಿ ಟೊರಾನಿ ತನ್ನ ಇತಿಹಾಸದಲ್ಲಿ ಯಾವುದೇ ಹಂತದಲ್ಲೂ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲೂ ಲೇಆಫ್ ಮಾಡದೆ, ಅನಗತ್ಯ ಖರ್ಚುಗಳನ್ನು ಕಡಿತಗೊಳಿಸುವ ಮೂಲಕ ಕಂಪನಿಯು ಆದಾಯದಲ್ಲಿ ಶೇ. 15ರಷ್ಟು ಹೆಚ್ಚಳ ದಾಖಲಿಸಿತ್ತು.