
ಉತ್ತರ ಪ್ರದೇಶದ ಝಾನ್ಸಿ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಅವರ ಕಿರಿಯ ಮಗ ಅಬಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಬಾನ್ ಪ್ರಯಾಣಿಸುತ್ತಿದ್ದ ಹುಂಡೈ ಕ್ರೆಟಾ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ ಸ್ನೇಹಿತ ಸೋನು ಕೂಡ ಮೃತಪಟ್ಟಿದ್ದಾರೆ.
ಝಾನ್ಸಿ ಜೈಲಿನಲ್ಲಿರುವ ಸಹೋದರ ಅಲಿ ಅಹ್ಮದ್ ಅವರನ್ನು ಭೇಟಿಯಾಗಿ ವಾಪಸ್ ಪ್ರಯಾಗ್ರಾಜ್ಗೆ ತೆರಳುತ್ತಿದ್ದಾಗ ಪೂಂಚ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.