
ತಿಂಗಳಿಗೆ 15,000 ರೂಪಾಯಿ ಸ್ಟೈಪೆಂಡ್ ಪಡೆಯುವ ಇಂಟರ್ನ್ ಆಗಿ ವೃತ್ತಿಜೀವನ ಆರಂಭಿಸಿದ ಯುವ ಟೆಕ್ಕಿಯೊಬ್ಬ, ಕೇವಲ ಎರಡೂವರೆ ವರ್ಷಗಳಲ್ಲಿ 25 ಲಕ್ಷ ರೂಪಾಯಿ ವಾರ್ಷಿಕ ಪ್ಯಾಕೇಜ್ ಪಡೆದಿದ್ದಾನೆ.
ಆರು ತಿಂಗಳಲ್ಲೇ 7 ಲಕ್ಷ ರೂಪಾಯಿ ವೇತನದೊಂದಿಗೆ ಫುಲ್-ಟೈಮ್ ಉದ್ಯೋಗ ಪಡೆದ ಈತ, ನಂತರದ ದಿನಗಳಲ್ಲಿ ಕಂಪನಿ ಬದಲಾಯಿಸುತ್ತಾ 9 ಲಕ್ಷ ಮತ್ತು 14 ಲಕ್ಷ ರೂಪಾಯಿ ಪ್ಯಾಕೇಜ್ಗಳನ್ನು ಗಳಿಸಿದ್ದಾನೆ.
ಪ್ರಸ್ತುತ ಸಿಂಗಾಪುರ ಮೂಲದ ಕಂಪನಿಯೊಂದರಲ್ಲಿ 25 ಲಕ್ಷ ರೂಪಾಯಿ ಪ್ಯಾಕೇಜ್ ಪಡೆಯುತ್ತಿರುವ ಈತನ ಯಶೋಗಾಥೆಯನ್ನು ಸಹಪಾಠಿ ಋತುಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ಉದ್ಯೋಗಿಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.