
ರಾಜ್ಯದ ಭದ್ರತಾ ಸಾಮರ್ಥ್ಯ ಹೆಚ್ಚಿಸಲು 500 ಪೊಲೀಸ್ ಸಿಬ್ಬಂದಿಗೆ ಯಲಹಂಕದಲ್ಲಿ ಒಂದು ತಿಂಗಳ ಕಾಲ ಎನ್‌ಎಸ್‌ಜಿ (NSG) ಕಮಾಂಡೋ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ.
ಕಮಾಂಡೋ, ಗರುಡಾ ಪಡೆ ಮತ್ತು ಆ್ಯಂಟಿ ಟೆರರಿಸ್ಟ್ ಸೆಲ್ (ATC) ಸಿಬ್ಬಂದಿಗೆ ಶೇ. 50ರಷ್ಟು ಹೆಚ್ಚುವರಿ ಭತ್ಯೆ ನೀಡುವುದಾಗಿ ಸಿಎಂ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಗ್ರೌಂಡ್‌ನಲ್ಲಿ ನಡೆದ ಎನ್‌ಎಸ್‌ಜಿ ಅಣುಕು ಪ್ರದರ್ಶನದಲ್ಲಿ ಉಗ್ರರ ದಾಳಿ ಮತ್ತು ಐಇಡಿ ನಿಷ್ಕ್ರಿಯಗೊಳಿಸುವಿಕೆಯಂತಹ ಸನ್ನಿವೇಶಗಳನ್ನು ಪ್ರಸ್ತುತಪಡಿಸಲಾಯಿತು.