
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 46 ಎಸೆತಗಳಲ್ಲಿ 61 ರನ್ ಸಿಡಿಸಿ ಫಾರ್ಮ್ಗೆ ಮರಳಿದ್ದಾರೆ.
ಜೈಸ್ವಾಲ್ 132.61 ಸ್ಟ್ರೈಕ್ ರೇಟ್ನಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಬಾರಿಸಿದ್ದು, ಶುಭ್ಮನ್ ಗಿಲ್ ಜೊತೆ ಮೊದಲ ವಿಕೆಟ್ಗೆ 100 ರನ್ ಪಾಲುದಾರಿಕೆ ನೀಡಿದ್ದಾರೆ.
ಬೆರಳಿನ ನೋವಿನಿಂದ ಬಳಲುತ್ತಿದ್ದ ನಾಯಕ ಶುಭ್ಮನ್ ಗಿಲ್ 54 ಎಸೆತಗಳಲ್ಲಿ 44 ರನ್ ಗಳಿಸಿದ್ದು, ಮೊದಲ ಟೆಸ್ಟ್ ವೇಳೆಗೆ ಸಂಪೂರ್ಣ ಚೇತರಿಸಿಕೊಳ್ಳುವ ಭರವಸೆ ಇದೆ.