
ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಕಾಫ್ಲಿಖಾನ್ ಗ್ರಾಮದ ಕಲಾ ವಿಭಾಗದ ಪದವೀಧರ ರವಿ ತಮಟ ಯಾವುದೇ ಇಂಜಿನಿಯರಿಂಗ್ ಪದವಿ ಇಲ್ಲದೆ ಸ್ವದೇಶಿ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಅನ್ನು ನಿರ್ಮಿಸಿದ್ದಾರೆ.
ಕಳೆದ 13 ವರ್ಷಗಳಿಂದ ಇಂಟರ್ನೆಟ್ ಮೂಲಕ ಮಾಹಿತಿ ಪಡೆದು ಸ್ವಂತ ಪರಿಶ್ರಮದಿಂದ 'ಹ್ಯಾಪಿಡಾ ಸ್ಕೈನೆಕ್ಸ್' ಹೆಸರಿನ ಈ ಏಕಸೀಟಿನ ಬ್ಯಾಟರಿ ಚಾಲಿತ ಹಾರುವ ಕಾರನ್ನು ತಯಾರಿಸಿದ್ದು, ಈಚೆಗೆ ಪ್ರಾಯೋಗಿಕ ಹಾರಾಟವೂ ಯಶಸ್ವಿಯಾಗಿದೆ.
ಯಾವುದೇ ರನ್ ವೇ ಇಲ್ಲದೆ ನೇರವಾಗಿ ಮೇಲಕ್ಕೆ ಹಾರುವ ಈ ಕಾರು ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಅತ್ಯಂತ ಉಪಯುಕ್ತವಾಗಲಿದೆ.