
ತಮಿಳುನಾಡಿನ ಕೊಯಮತ್ತೂರಿನ ವೌಸಿ ನಗರದಲ್ಲಿ ಒಂದೂವರೆ ವರ್ಷದ ಧನ್ವಂತ್ ಎಂಬ ಬಾಲಕ ಮನೆಯ ಮುಂದೆ ಆಟವಾಡುತ್ತಿದ್ದಾಗ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟಿದ್ದಾನೆ.
ಸಂಪ್‌ನ ಮೇಲ್ಭಾಗದಲ್ಲಿ ಇರಿಸಿದ್ದ ಟಿನ್ ಪ್ಲೇಟ್ ಸರಿಯಾಗಿ ಮುಚ್ಚದ ಕಾರಣ ಮಗು ಆಕಸ್ಮಿಕವಾಗಿ ಒಳಗೆ ಬಿದ್ದಿದ್ದು, ಪೋಷಕರು ಹುಡುಕಾಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದು, ರತ್ನಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.