
ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆಸಿದ ತಪಾಸಣೆಯಲ್ಲಿ ಪ್ಯಾರಾಸಿಟಮಾಲ್ ಸೇರಿದಂತೆ ಒಟ್ಟು 301 ಔಷಧ ಬ್ಯಾಚ್‌ಗಳು ನಿಗದಿತ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ.
ಕೆಎಸ್‌ಎಂಎಸ್‌ಸಿಎಲ್ ಮೂಲಕ ಖರೀದಿಸಿದ 19.2 ಕೋಟಿ ರೂ. ಮೌಲ್ಯದ 98 ಪ್ರಕಾರದ ಔಷಧಗಳು ಕಳಪೆ ಎಂದು ದೃಢಪಟ್ಟಿದ್ದು, 2024-25ರಲ್ಲಿಯೇ 5.2 ಕೋಟಿ ರೂ. ಮೌಲ್ಯದ 146 ಬ್ಯಾಚ್‌ಗಳು ಕಳಪೆಯಾಗಿವೆ.
ಕಳಪೆ ಔಷಧ ಪೂರೈಸಿದ ಕನಿಷ್ಠ 5 ಕಂಪನಿಗಳನ್ನು ಸರ್ಕಾರ ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಿದ್ದು, ಕಳಪೆ ಸ್ಟಾಕ್ ಪತ್ತೆಯಾದ ತಕ್ಷಣ ಸರಬರಾಜನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ.