
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾವನ್ನು ನಟ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಅವರೊಂದಿಗೆ ಚಿತ್ರಮಂದಿರಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ.
ಸಿನಿಮಾದ ಕೊನೆಯ 20 ನಿಮಿಷಗಳು ಗೇಮ್ ಚೇಂಜಿಂಗ್ ಆಗಿದ್ದು, ಯಶ್ ಅವರ ನಟನೆ ಅದ್ಭುತವಾಗಿದೆ ಎಂದು ಶಿವಣ್ಣ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗ ಬೆಳೆಯಬೇಕು ಎಂದು ಹೇಳಿದ ಶಿವರಾಜ್ ಕುಮಾರ್, ನೆಗೆಟಿವ್ ವಿಮರ್ಶೆಗಳನ್ನು ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರೇಕ್ಷಕರಾಗಿ ಸಿನಿಮಾ ನೋಡಿ ಬೆಂಬಲಿಸಬೇಕೆಂದು ಕರೆ ನೀಡಿದ್ದಾರೆ.