
ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಅಜಿಂಕ್ಯ ರಹಾನೆ, ಆಗಸ್ಟ್ 15 ರಿಂದ ಆರಂಭವಾಗುವ ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯ ಮೂಲಕ ವೀಕ್ಷಕ ವಿವರಣೆಗಾರನಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
37 ವರ್ಷದ ರಹಾನೆ ಭಾರತದ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 38.46 ಸರಾಸರಿಯಲ್ಲಿ 5,077 ರನ್ ಗಳಿಸಿದ ಅನುಭವವನ್ನು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಹಂಚಿಕೊಳ್ಳಲಿದ್ದಾರೆ.
ಆಗಸ್ಟ್ 15 ರಿಂದ 27 ರವರೆಗೆ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಹಾನೆ ಮೊದಲ ಬಾರಿಗೆ ಕಾಮೆಂಟರಿ ನೀಡಲಿದ್ದಾರೆ ಎಂದು ಸ್ವತಃ ಅವರೇ ಖಚಿತಪಡಿಸಿದ್ದಾರೆ.