
ಪಿಎಂ ಕೇರ್ಸ್ ಫಂಡ್‌ನ ಒಟ್ಟು ಮೊತ್ತವು ಮಾರ್ಚ್ 31, 2025ರ ಅಂತ್ಯಕ್ಕೆ 8,452.95 ಕೋಟಿ ರೂ.ಗೆ ಏರಿಕೆಯಾಗಿದೆ.
ನಿಧಿಯ ಒಟ್ಟು ಮೊತ್ತದ ಶೇ. 93 ರಷ್ಟು ಅಂದರೆ 7,846.65 ಕೋಟಿ ರೂ.ಗಳನ್ನು ಬ್ಯಾಂಕ್‌ಗಳ ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಲಾಗಿದೆ.
ಈ ಹಣಕಾಸು ವರ್ಷದಲ್ಲಿ ನಿಧಿಯಿಂದ ಕೇವಲ 87.85 ಲಕ್ಷ ರೂ.ಗಳನ್ನು ಮಾತ್ರ ವೆಚ್ಚ ಮಾಡಲಾಗಿದ್ದು, ದೇಣಿಗೆ ಸಂಗ್ರಹದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.