Health & Environment
ಫ್ರಾನ್ಸ್ ಮತ್ತು ಸ್ಪೇನ್‌ನಲ್ಲಿ ಕಾಳ್ಗಿಚ್ಚು: 3 ಲಕ್ಷ ಜನರ ಸ್ಥಳಾಂತರ

ಫ್ರಾನ್ಸ್ ಮತ್ತು ಸ್ಪೇನ್‌ನಲ್ಲಿ ಕಾಳ್ಗಿಚ್ಚು: 3 ಲಕ್ಷ ಜನರ ಸ್ಥಳಾಂತರ

prajavani19h
THE BRIEF
1

ಫ್ರಾನ್ಸ್ ಮತ್ತು ಸ್ಪೇನ್‌ನಲ್ಲಿ ವ್ಯಾಪಕವಾಗಿ ಹರಡಿರುವ ಕಾಳ್ಗಿಚ್ಚಿನಿಂದಾಗಿ ಈವರೆಗೆ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

2

ಫ್ರಾನ್ಸ್‌ನ ಬೋರ್ಡೋ ನಗರದ ಸುತ್ತಮುತ್ತ 2.20 ಲಕ್ಷ ಜನರು ಮತ್ತು ಸ್ಪೇನ್‌ನ ಆವಿಲಾ ಪ್ರಾಂತ್ಯದಲ್ಲಿ 75,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

3

ಸ್ಪೇನ್‌ನಲ್ಲಿ ಈ ವರ್ಷ 1.5 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ನಾಶವಾಗಿದ್ದು, ಯುರೋಪಿಯನ್ ಯೂನಿಯನ್ ನೆರವಿನೊಂದಿಗೆ ಅಗ್ನಿಶಾಮಕ ಕಾರ್ಯಾಚರಣೆ ಮುಂದುವರಿದಿದೆ.