
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ತದಡಿ ಮೀನುಗಾರಿಕಾ ಬಂದರಿನಲ್ಲಿ ಬೋಟ್ನ ಕೋಲ್ಡ್ ಸ್ಟೋರೇಜ್ ಸ್ವಚ್ಛಗೊಳಿಸಲು ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಕೊಳೆತ ಚಮನ್ ಮೀನಿನ ತ್ಯಾಜ್ಯದಿಂದ ವಿಷಕಾರಿ ಅನಿಲ ಉತ್ಪತ್ತಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಘಟನೆಯಲ್ಲಿ ಓರ್ವ ಕಾರ್ಮಿಕ ಅಸ್ವಸ್ಥಗೊಂಡು ಬದುಕುಳಿದಿದ್ದಾರೆ.
ಮೀನುಗಾರಿಕಾ ಸಚಿವ ಬಸವಂತಪ್ಪ ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ್ದು, ಸಮಗ್ರ ತನಿಖೆಗೆ ಸೂಚಿಸಿದ್ದಾರೆ.