
ಚೀನಾ ಟನಲ್ ಬೋರಿಂಗ್ ಮೆಷಿನ್‌ಗಳ (TBM) ರಫ್ತಿಗೆ ನಿರ್ಬಂಧ ವಿಧಿಸಿರುವುದರಿಂದ ಭಾರತದ ಮೆಟ್ರೋ ಮತ್ತು ಸುರಂಗ ಯೋಜನೆಗಳಿಗೆ ಅಡ್ಡಿಯಾಗಿದ್ದು, ಸರ್ಕಾರ ಸ್ವಾವಲಂಬನೆಯ ದಾರಿ ಹಿಡಿದಿದೆ.
ಭಾರತವು ಈಗ ಜಪಾನ್ ಮತ್ತು ಜರ್ಮನಿಯಂತಹ ದೇಶಗಳೊಂದಿಗೆ ಸಹಭಾಗಿತ್ವ ವಹಿಸಿ ದೇಶೀಯವಾಗಿ ಅತ್ಯಾಧುನಿಕ ಯಂತ್ರಗಳನ್ನು ತಯಾರಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ.
ಮೂಲಸೌಕರ್ಯ ಯೋಜನೆಗಳಲ್ಲಿ ಬಳಸುವ ವಿದೇಶಿ ಉಪಕರಣಗಳ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಮೇಲೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ.