
ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ನೀಡಿದ್ದ ನಾಗೇಂದ್ರ ಎಂಬುವರನ್ನು ಬಂಧಿಸಿದ ಬೆಳ್ಳಂದೂರು ಪೊಲೀಸರ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಜುಲೈ 22ರ ರಾತ್ರಿ 11.30ಕ್ಕೆ ದೂರು ನೀಡಿದ್ದ ನಾಗೇಂದ್ರ ವಿರುದ್ಧವೇ 15 ನಿಮಿಷಗಳ ಅಂತರದಲ್ಲಿ ಕೇಸ್ ದಾಖಲಿಸಿದ್ದ ಪೊಲೀಸರ ಕ್ರಮವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಕೇಸ್ಗೆ ತಡೆಯಾಜ್ಞೆ ನೀಡಿದ್ದು, ಪೊಲೀಸರ ಕ್ರಮದ ಬಗ್ಗೆ ಆಗಸ್ಟ್ 6ರೊಳಗೆ ವಿವರಣೆ ನೀಡುವಂತೆ ಸೂಚಿಸಿದೆ.