
ದೈವ ಕೊರಗಜ್ಜನ ಮೂಲ ಸಮುದಾಯದ 33 ಕುಟುಂಬಗಳಿಗೆ ಮಂಗಳೂರಿನಲ್ಲಿ ಸ್ವಂತ ಜಾಗವಿಲ್ಲದೆ ದಶಕಗಳಿಂದ ಅನಾಥರಂತೆ ಬದುಕುವ ದುಸ್ಥಿತಿ ಎದುರಾಗಿದೆ.
2018ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ವಾಮಂಜೂರು ಬಳಿ ಪ್ರತಿ ಕುಟುಂಬಕ್ಕೆ 2.25 ಸೆಂಟ್ಸ್ ಜಾಗ ನೀಡಲು ಆದೇಶಿಸಿ, ಮೂಲಸೌಕರ್ಯಕ್ಕೆ ₹2.83 ಕೋಟಿ ಖರ್ಚು ಮಾಡಿದ್ದರೂ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಹಕ್ಕುಪತ್ರಕ್ಕಾಗಿ ಕಳೆದ 8 ವರ್ಷಗಳಲ್ಲಿ 17 ಬಾರಿ ಪ್ರತಿಭಟಿಸಿದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದು, ಕೂಡಲೇ ಹಕ್ಕುಪತ್ರ ನೀಡದಿದ್ದರೆ ಬೆತ್ತಲೆ ಮೆರವಣಿಗೆ ನಡೆಸುವುದಾಗಿ ಸಮುದಾಯ ಎಚ್ಚರಿಕೆ ನೀಡಿದೆ.