
ಕನ್ನಡದ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ನಟಿಸಿರುವ ಮೊದಲ ತಮಿಳು ಚಿತ್ರವಾದ ನಯನತಾರಾ ಅಭಿನಯದ ‘ಮೂಕುತ್ತಿ ಅಮ್ಮನ್ 2’ ನವೆಂಬರ್ 6ರಂದು ಬಿಡುಗಡೆಯಾಗಿದೆ.
ಹಿರಿಯ ನಿರ್ದೇಶಕ ಸುಂದರ್ ಸಿ ನಿರ್ದೇಶನದ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ರುಧಿರನ್ ಮತ್ತು ಈಶ್ವರನ್ ಎಂಬ ಎರಡು ಭಿನ್ನ ಲುಕ್ನ ವಿಲನ್ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ಅವರ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅವರ ಕೆಲವು ದೃಶ್ಯಗಳ ರೀಲ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.