Sports
ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಅಶ್ಮಿತಾ ಚಾಲಿಹಾಗೆ ಚೊಚ್ಚಲ ಬಿಡಬ್ಲ್ಯುಎಫ್ ಪ್ರಶಸ್ತಿ

ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಅಶ್ಮಿತಾ ಚಾಲಿಹಾಗೆ ಚೊಚ್ಚಲ ಬಿಡಬ್ಲ್ಯುಎಫ್ ಪ್ರಶಸ್ತಿ

prajavani2h
THE BRIEF
1

ಅಸ್ಸಾಂನ ಅಶ್ಮಿತಾ ಚಾಲಿಹಾ ಅವರು ಕೊರಿಯಾ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಚೀನಾದ ಹಾನ್ ಕ್ವಿಯಾನ್ ಷಿ ಅವರನ್ನು ಸೋಲಿಸಿ ಚೊಚ್ಚಲ ಬಿಡಬ್ಲ್ಯುಎಫ್ ಪ್ರಶಸ್ತಿ ಗೆದ್ದಿದ್ದಾರೆ.

2

ಭಾನುವಾರ 53 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅಶ್ಮಿತಾ 14-21, 21-14, 21-14 ಅಂತರದ ಗೇಮ್‌ಗಳಿಂದ ವಿಶ್ವ ಕ್ರಮಾಂಕದ 35ನೇ ಸ್ಥಾನಿ ಕ್ವಿಯಾನ್ ಷಿ ವಿರುದ್ಧ ಜಯ ಸಾಧಿಸಿದರು.

3

2024ರಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆ ಪಡೆದಿದ್ದ 26 ವರ್ಷದ ಅಶ್ಮಿತಾ, 2025ರ ಫೆಬ್ರುವರಿಯಲ್ಲಿ ಕ್ರೀಡಾಂಗಣಕ್ಕೆ ಮರಳಿದ ನಂತರ ಈ ಮಹತ್ವದ ಸಾಧನೆ ಮಾಡಿದ್ದಾರೆ.