
ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ನೈಜ ವಿಸ್ತೀರ್ಣವನ್ನು ಬಿಂಬಿಸುವ 'ಈಕ್ವಲ್ ಅರ್ಥ್' ವಿಶ್ವ ಭೂಪಟವನ್ನು ಅಳವಡಿಸಿಕೊಳ್ಳಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿದೆ.
164 ರಾಷ್ಟ್ರಗಳು ಈ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದರೆ, ಅಮೆರಿಕವು ಈ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಎತ್ತಿದೆ.
1569ರ ಮರ್ಕೇಟರ್ ನಕ್ಷೆಯ ಬದಲಾಗಿ ಜಾಗತಿಕ ಶೈಕ್ಷಣಿಕ ಪಠ್ಯಪುಸ್ತಕಗಳಲ್ಲಿ ಇನ್ನುಮುಂದೆ ಈ ನೂತನ ಭೂಪಟವನ್ನು ಪ್ರಮಾಣಿತವಾಗಿ ಬಳಸುವಂತೆ ವಿಶ್ವಸಂಸ್ಥೆ ಕರೆ ನೀಡಿದೆ.