
ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಆಂಧ್ರ ತಂಡವು ಎರಡನೇ ದಿನದ ಆಟ ಮುಗಿದಾಗ 57 ರನ್ಗಳ ಮುನ್ನಡೆ ಸಾಧಿಸಿದೆ.
ಆಂಧ್ರದ ಸೀರಂ ರಾಹುಲ್ ಔಟಾಗದೆ 108 ರನ್ ಗಳಿಸಿದರೆ, ರೇವಂತ್ ರೆಡ್ಡಿ 97 ರನ್ ಗಳಿಸಿ ಔಟಾದರು.
ಈ ಇಬ್ಬರು ಸೇರಿ ಆರನೇ ವಿಕೆಟ್ಗೆ 202 ರನ್ಗಳ ಭರ್ಜರಿ ಜೊತೆಯಾಟವಾಡಿ ತಂಡವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದರು.