
ಅಮೆರಿಕ ಮೂಲದ ಎಐ ಸೇವಾ ಕಂಪನಿಯಾದ ಇನ್ನೋಡೇಟಾ ಭಾರತದಲ್ಲಿ 550ಕ್ಕೂ ಹೆಚ್ಚು ಉದ್ಯೋಗಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಆಗಿ ಕೆಲಸದಿಂದ ವಜಾಗೊಳಿಸಿದೆ.
ಅಕ್ಟೋಬರ್ 26ರ ಸೋಮವಾರದಂದು ಉದ್ಯೋಗಿಗಳ ಸಿಸ್ಟಮ್ ಲಾಗ್ ಔಟ್ ಆಗಿದ್ದು, ಸಂಜೆಯ ವೇಳೆಗೆ ವೈಯಕ್ತಿಕ ಇಮೇಲ್ ಐಡಿಗಳಿಗೆ ಟರ್ಮಿನೇಷನ್ ಲೆಟರ್ ರವಾನೆಯಾಗಿದೆ.
ಕ್ಲೈಂಟ್ ಕಡೆಯಿಂದ ಸೇವೆಗಳ ಬೇಡಿಕೆ ಕಡಿಮೆಯಾಗಿ ಪ್ರಾಜೆಕ್ಟ್ ರದ್ದಾಗಿರುವ ಕಾರಣ ಕಂಪನಿಯ ವ್ಯವಹಾರದ ಅಗತ್ಯತೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.