
2026ರ ಕಾಮನ್ವೆಲ್ತ್ ಕ್ರೀಡಾಕೂಟದ 10ನೇ ದಿನದಂದು ಮಹಿಳೆಯರ 70 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಅರುಂಧತಿ ಚೌಧರಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ನ ಚಾಂಟೆಲ್ಲೆ ರೀಡ್ ಅವರನ್ನು ಸೋಲಿಸಿದ ಅರುಂಧತಿ, ರಾಜಸ್ಥಾನದಿಂದ ಕಾಮನ್ವೆಲ್ತ್ ಚಿನ್ನ ಗೆದ್ದ ಮೊದಲ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದು ಭಾರತಕ್ಕೆ ಬಾಕ್ಸಿಂಗ್ ವಿಭಾಗದಲ್ಲಿ ಲಭಿಸಿದ 5ನೇ ಚಿನ್ನದ ಪದಕವಾಗಿದ್ದು, ಇದೇ ದಿನ ಇತರ ನಾಲ್ವರು ಮಹಿಳಾ ಬಾಕ್ಸರ್ಗಳು ಕೂಡ ಬಂಗಾರಕ್ಕೆ ಮುತ್ತಿಟ್ಟಿದ್ದಾರೆ.