
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಸಾವಿನ ಸಂಖ್ಯೆ 584ಕ್ಕೆ ಏರಿದ್ದು, ನಾಪತ್ತೆಯಾದವರಲ್ಲಿ 400ಕ್ಕೂ ಅಧಿಕ ಭಾರತೀಯರು ಸೇರಿದ್ದಾರೆ ಎಂದು ವರದಿಯಾಗಿದೆ.
ದುರಂತದಲ್ಲಿ ಇಲ್ಲಿಯವರೆಗೆ 3,742 ಜನರನ್ನು ರಕ್ಷಿಸಲಾಗಿದ್ದು, ಭಾರತ ಸರ್ಕಾರವು ಈಗಾಗಲೇ ವೈದ್ಯಕೀಯ ಸಾಮಗ್ರಿಗಳು ಮತ್ತು ಆಹಾರದಂತಹ ಅಗತ್ಯ ವಸ್ತುಗಳನ್ನು ನೆರವಿಗಾಗಿ ಕಳುಹಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಮನವಿ ಮಾಡಿದ್ದಾರೆ.