
ರಷ್ಯಾದ ತಾತರ್ಸ್ತಾನ್ ಪ್ರದೇಶದ ನಿಜ್ನೆಕಾಮ್ಸ್ಕ್ ನಗರದ ತೈಲ ಸಂಸ್ಕರಣಾಗಾರದ ಮೇಲೆ ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ 13 ಜನರು ಮೃತಪಟ್ಟಿದ್ದು, 75 ಮಂದಿ ಗಾಯಗೊಂಡಿದ್ದಾರೆ.
ಈ ದಾಳಿಯಲ್ಲಿ ಗಾಯಗೊಂಡವರ ಪೈಕಿ 21 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಉಕ್ರೇನ್ ಗಡಿಯಿಂದ ಸುಮಾರು 1,200 ಕಿಲೋಮೀಟರ್ ದೂರದಲ್ಲಿರುವ ಈ ನಗರದ ಮೇಲೆ ನಡೆದ ಅತಿ ದೊಡ್ಡ ದಾಳಿ ಇದಾಗಿದೆ.
ರಷ್ಯಾದ ಆರ್ಥಿಕತೆಗೆ ಹೊಡೆತ ನೀಡಲು ಉಕ್ರೇನ್ ದೀರ್ಘ ಶ್ರೇಣಿಯ ಡ್ರೋನ್ಗಳನ್ನು ಬಳಸುತ್ತಿದ್ದು, ಈ ಯುದ್ಧದ ಬಿಸಿ ಈಗ ರಷ್ಯಾದ ಮನೆಗಳಿಗೂ ತಟ್ಟುತ್ತಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.