
ಕರ್ನಾಟಕದಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ವಾಹನಗಳ ಎಮಿಷನ್ ಟೆಸ್ಟ್ (PUC) ದರವನ್ನು ಸಾರಿಗೆ ಇಲಾಖೆ ಹೆಚ್ಚಳ ಮಾಡಿದ್ದು, ವಾಹನ ಸವಾರರಿಗೆ ಆರ್ಥಿಕ ಹೊರೆ ಬಿದ್ದಿದೆ.
ದ್ವಿಚಕ್ರ ವಾಹನಗಳಿಗೆ 65 ರೂ.ನಿಂದ 80 ರೂ.ಗೆ, ಕಾರುಗಳಿಗೆ 115 ರೂ.ನಿಂದ 150 ರೂ.ಗೆ ಮತ್ತು ಡೀಸೆಲ್ ವಾಹನಗಳಿಗೆ 160 ರೂ.ನಿಂದ 200 ರೂ.ಗೆ ದರ ಪರಿಷ್ಕರಿಸಲಾಗಿದೆ.
ಎಮಿಷನ್ ಸರ್ಟಿಫಿಕೇಟ್ ಇಲ್ಲದಿದ್ದರೆ ಸಂಚಾರ ಪೊಲೀಸರು 500 ರಿಂದ 1,000 ರೂ. ದಂಡ ವಿಧಿಸುವುದಲ್ಲದೆ, ಅಪಘಾತದ ಸಂದರ್ಭದಲ್ಲಿ ಇನ್ಶೂರೆನ್ಸ್ ಕ್ಲೈಮ್ ಪಡೆಯುವುದು ಕಷ್ಟವಾಗುತ್ತದೆ ಎಂದು ಇಲಾಖೆ ತಿಳಿಸಿದೆ.