
ಬಾಲಿವುಡ್‌ನ ಯಶಸ್ವಿ ಫ್ರಾಂಚೈಸಿ ‘ದೃಶ್ಯಂ’ ಸರಣಿಯ ಮೂರನೇ ಹಾಗೂ ಕೊನೆಯ ಭಾಗ ‘ದೃಶ್ಯಂ: ದ ಕನ್‌ಕ್ಲೂಷನ್’ ಚಿತ್ರದ ಟ್ರೇಲರ್ ಬುಧವಾರ (ಸೆಪ್ಟೆಂಬರ್ 9) ಬಿಡುಗಡೆಯಾಗಿದೆ.
ಅಜಯ್ ದೇವಗನ್ ವಿಜಯ್ ಸಾಲ್ಗಾಂವ್ಕರ್ ಪಾತ್ರದಲ್ಲಿ ಮುಂದುವರಿದಿದ್ದು, ಈ ಭಾಗದ ಕಥೆಯು ಮಲಯಾಳಂನ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಚಿತ್ರಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕಾಶ್ ರಾಜ್ ಮತ್ತು ಜೈದೀಪ್ ಅಹ್ಲಾವತ್ ಹೊಸ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಟಬು ಮತ್ತು ಶ್ರಿಯಾ ಶರಣ್ ತಮ್ಮ ಹಳೆಯ ಪಾತ್ರಗಳಲ್ಲಿ ಮುಂದುವರಿದಿದ್ದಾರೆ.