
ಅಸ್ಸಾಂನ ಶ್ರೀಭೂಮಿ ಜಿಲ್ಲೆಯ ಅಲೆಖಾರ್ಗುಲ್ ಗ್ರಾಮದ ರೈತ ನಜ್ರುಲ್ ಹಕ್ ಅವರು ಪ್ರವಾಹದ ನೀರನ್ನೇ ಬಳಸಿ ವೈಜ್ಞಾನಿಕ ಮೀನುಗಾರಿಕೆ ಆರಂಭಿಸುವ ಮೂಲಕ ಇಡೀ ಗ್ರಾಮದ ಆರ್ಥಿಕ ಪರಿಸ್ಥಿತಿಯನ್ನು ಬದಲಿಸಿದ್ದಾರೆ.
ಬ್ಯಾಂಕ್ ಸಾಲ ಪಡೆದು 100 ಹೆಕ್ಟೇರ್ ಪ್ರದೇಶದಲ್ಲಿ ಮೀನು ಸಾಕಾಣಿಕೆ ವಿಸ್ತರಿಸಿರುವ ಇವರು ತಿಂಗಳಿಗೆ 1.5 ಲಕ್ಷ ರೂ. ವರೆಗೆ ಆದಾಯ ಗಳಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಈ ರೈತನ ಸಾಧನೆಯಿಂದ ಪ್ರೇರಿತರಾಗಿ ಗ್ರಾಮದ 300ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಹಳ್ಳಿಯನ್ನು ಅಧಿಕೃತವಾಗಿ ಮೀನುಗಾರಿಕಾ ಗ್ರಾಮವೆಂದು ನಾಮಕರಣ ಮಾಡಿದೆ.